ವಿದ್ಯಾರ್ಥಿಗಳಿಗೆ ಸ್ವ-ಗತಿ ಕಲಿಕೆ, ಮೌಲ್ಯಮಾಪನ ವೇದಿಕೆಯನ್ನು ಶುರು ಮಾಡಲಿದೆ ಶಿಕ್ಷಣ ಸಚಿವಾಲಯ

ಈ ವೇದಿಕೆ – ಸ್ವಯಂ ಮೌಲ್ಯಮಾಪನ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಗಳಿಗೆ ಸಹಾಯ (SATHEE) – ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಕಾನ್ಪುರದ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ.

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಅವರ ಪ್ರಕಾರ, ಶಿಕ್ಷಣ ಸಚಿವಾಲಯವು ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸ್ವ-ಗತಿ ಸಂವಾದಾತ್ಮಕ ಕಲಿಕೆ ಮತ್ತು ಮೌಲ್ಯಮಾಪನವನ್ನು ನೀಡುವ ವೇದಿಕೆಯನ್ನು ಶುರು ಮಾಡಲಿದೆ.

ಈ ವೇದಿಕೆ – ಸ್ವಯಂ ಮೌಲ್ಯಮಾಪನ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಗಳಿಗೆ ಸಹಾಯ (SATHEE) – ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಕಾನ್ಪುರದ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ.

“ಈ ವೇದಿಕೆಯು ದುಬಾರಿ ಪ್ರವೇಶ ಪರೀಕ್ಷೆ ಮಾರ್ಗದರ್ಶನ ಮತ್ತು ತರಬೇತಿಯನ್ನು ಭರಿಸಲು ಸಾಧ್ಯವಾಗದ ಸಮಾಜದ ವಿದ್ಯಾರ್ಥಿಗಳ ಅಂತರವನ್ನು ತುಂಬುವ ಗುರಿ ಹೊಂದಿದೆ. ಐಐಟಿ ಮತ್ತು ಐಐಎಸ್ಸಿ ಶಿಕ್ಷಕ ಸದಸ್ಯರು ತಯಾರಿಸಿದ ವೀಡಿಯೊಗಳನ್ನು ನೋಡುವ ಮೂಲಕ ಯಾವುದೇ ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಅನುಭವಿಸುವಂತೆ, ಪರಿಕಲ್ಪನೆಗಳನ್ನು ಕಲಿಯಲು ಮತ್ತು ಅವರ ದುರ್ಬಲ ವಿಷಯಗಳ ಮೇಲೆ ಕೇಂದ್ರೀಕರಿಸಲು ಇದು ಉದ್ದೇಶಿಸುತ್ತದೆ,” ಎಂದು ಕುಮಾರ್ ಅವರು ಟ್ವೀಟ್ಗಳ ಸರಣಿಯಲ್ಲಿ ತಿಳಿಸಿದರು.

ಈ ವೇದಿಕೆಯನ್ನು ಮಾರ್ಚ್ 6 ರಂದು ಕೇಂದ್ರ ಶಿಕ್ಷಣ ಮಂತ್ರಿ ಲಾಂಚ್ ಮಾಡಲಿದ್ದಾರೆ.